Tulasi Pooja Maduva Vidhana Mattu Mahatva

               ನಮ್ಮ ಹಿಂದೂ ನಾರಿಯರು ದಿನನಿತ್ಯ ತುಳಸಿ ಪೂಜೆಯನ್ನು ಮಾಡುತ್ತಾರೆ . ಆದರೆ ಕಾರ್ತಿಕ ಮಾಸದಲ್ಲಿ  ಬರುವ ಶುಕ್ಲ ಪಕ್ಷದ ದ್ವಾದಶಿ ದಿನದಂದು  ತುಳಸಿಯ ಮದುವೆ ಅಥವಾ ತುಳಸಿ ಹಬ್ಬವಾಗಿ ಆಚರಿಸಲಾಗುತ್ತದೆ. ದೀಪಾವಳಿ ಮುಗಿದ ೧೫ ದಿನಕ್ಕೆ ತುಳಸಿ ಹಬ್ಬ ಬರುತ್ತದೆ. ಹಿಂದೂ ಸಂಪ್ರದಾಯದಲ್ಲಿ  ತುಳಸಿ ಎಂದರೆ ದೇವರ ಸಮಾನ.  ಕಾರ್ತಿಕಮಾಸ ಉತ್ವಾನ ದ್ವಾದಶಿಯಂದು ತುಳಸಿ ಹಬ್ಬವನ್ನು ಮಾಡುತ್ತಾರೆ.  
                                                    ಕಿರು ದೀಪಾವಳಿಯಂದು ನಿದ್ದೆಯಿಂದ ಎದ್ದು ಬರುವ ಶ್ರೀಕೃಷ್ಣನನ್ನು ಸ್ವಾಗತಿಸಲು ವಿಷ್ಣು ಸ್ವರೂಪಿಯಾದ ತುಳಸಿಯನ್ನು ಮತ್ತು ತುಳಸಿ ಕಟ್ಟೆಯನ್ನು ಅಲಂಕಾರ ಮಾಡಿ ತುಳಸಿಗಿಡದ ಜೊತೆಯಲ್ಲಿ ದೊಡ್ಡ ನೆಲ್ಲಿಕಾಯಿ ಗಿಡವನ್ನು ಇಟ್ಟು ನೆಲ್ಲಿಕಾಯಿಯಿಂದ ತುಪ್ಪದ ದೀಪವನ್ನು ಹಚ್ಚುತ್ತಾರೆ. ಈ ದಿನದಂದು ಕೃಷ್ಣನ (ವಿಷ್ಣು ) ಜೊತೆ ತುಳಸಿ ದೇವಿಯ ಮದುವೆಯನ್ನು ಮಾಡಿಸುತ್ತಾರೆ. 
Thulasi Pooja Visistatha 
   ಪುರಾಣಗಳ ಪ್ರಕಾರ ತುಳಸಿ ಜಲಂಧರ ಅನ್ನೋ ರಾಕ್ಷಸನ ಪತ್ನಿ.  ಬೃಂಧ ಅನ್ನೋದು ತುಳಸಿಯ ಮತ್ತೊಂದು ಹೆಸರು. ತುಳಸಿಯ ಪುಣ್ಯ ಫಲದಿಂದಾಗಿ ಜಲಂಧರನನ್ನು ಯಾರಿಂದಲೂ ತನ್ನನು ಸೋಲಿಸಲು ಆಗದಿರುವ ಶಕ್ತಿಯನ್ನು ಪಡೆದುಕೊಂಡಿರುತ್ತಾನೆ. 
               ಜಲಂಧರನ ಉಪಟಳ ತಾಳೋಕೆ ಆಗದೆ ದೇವತೆಗಳೆಲ್ಲ ವಿಷ್ಣುವಿನ ಮೊರೆ ಹೋಗುತ್ತಾರೆ. ಆಗ ಜಲಂಧರನ ವೇಷದಲ್ಲಿ ಬಂದು ವಿಷ್ಣುವು ಬೃಂದಾಳೊಂದಿಗೆ ಸರಸವಾಡುತ್ತಾನೆ. ಇದರಿಂದ ಕೋಪಗೊಂಡ ತುಳಸಿಯು ತನ್ನ  ಪವಿತ್ರತೆಯನ್ನು ಕಳೆದು ಕೊಂಡು ಜಲಂಧರನಿಗೆ  ಯುದ್ಧದಲ್ಲಿ ನಾಶವಾಗಿ ಸಾವನ್ನಪ್ಪು  ಎಂದು ಸತ್ಯಹರಿತ ಬೃಂದಾ ಜಲಂಧರ ರೂಪದಲ್ಲಿದ್ದ ವಿಷ್ಣುವನ್ನ ಶಪಿಸಿ ಆತ ಸಾಲಿಗ್ರಾಮವಾಗಲಿ ಎಂದು ಶಾಪವನ್ನು ನೀಡಿ ಚಿತೆಗೊಳಗಾಗುತ್ತಾಳೆ. ಬೃಂದಾ ಕೂಡ ಸಾವನ್ನು ಅಪ್ಪುತ್ತಾಳೆ.                                                                                                                                                                         ನಂತರ  ಪತಿವ್ರತೆಯಾದ  ಬೃಂದಾ, ತುಳಸಿಯಾಗಿ ಜನ್ಮತಾಳುತ್ತಾಳೆ. ಪ್ರತಿ ಮಹಿಳೆ ಕೂಡ ತನ್ನ ಪತಿಯ ಒಳಿತಿಗೆ ಮತ್ತು ಆಯುಷಭಿವೃದ್ದಿಗಾಗಿ ತುಳಸಿ ಪೂಜೆ ಮಾಡುತ್ತಾರೆ.  ನೆಲ್ಲಿಕಾಯಿ ಗಿಡದಲ್ಲಿ ವಿಷ್ಣುವಿನ  ರೂಪದಲ್ಲಿ ಕಾಣುತ್ತಾರೆ. 
                                                 ಆದ್ದರಿಂದ ತುಳಸಿ ಹಬ್ಬದಲ್ಲಿ ತುಳಸಿಯ ಪಕ್ಕದಲ್ಲಿ ನೆಲ್ಲಿಗಿಡದ ಟೊಂಗೆಯನ್ನು ಇಟ್ಟು ಇಬ್ಬರಿಗೂ ಮದುವೆ ಮಾಡುವುದು ಹಿಂದೂ  ಸಂಪ್ರದಾಯದಲ್ಲಿದೆ.
               ಉತ್ವಾನ ದ್ವಾದಶಿಯಂದು ತುಳಸಿ ಕಟ್ಟೆಯನ್ನು ಸ್ವಚ್ಛಗೊಳಿಸಿ  ಸುಣ್ಣವನ್ನು ಹಚ್ಚಿ  ರಂಗೋಲಿ ಹಾಕಿ ತುಳಸಿ ಕಟ್ಟೆಗೆ ಮಂಟಪವನ್ನು ಕಟ್ಟಿ ಹೂವಿನಿಂದ ಅಲಂಕಾರ ಮಾಡಿ  ಗೆಜ್ಜೆವಸ್ತ್ರವನ್ನು ಹಾಕಿ ಮಾವಿನ ಎಲೆಗಳಿಂದ ಅಲಂಕರಿಸಿ, ನೆಲ್ಲಿಕಾಯಿಯಿಂದ ತುಪ್ಪದ ದೀಪವನ್ನು ಹಚ್ಚಿ ದೊಡ್ಡ ನೆಲ್ಲಿಕಾಯಿ ಗಿಡವನ್ನು ವಿಷ್ಣುವಿನ  ರೂಪ ಎಂದು ಭಾವಿಸಿ ತುಳಸಿಗಿಡದ  ಪಕ್ಕದಲ್ಲಿ ದೊಡ್ಡ  ನೆಲ್ಲಿಕಾಯಿಯ ಗಿಡದ  ಟೊಂಗೆಯನ್ನು  ಇಟ್ಟು ಪೂಜಿಸಬೇಕು. 
              ತುಂಬಾ ಜನ ತುಳಸಿ ಕಟ್ಟೆಗೆ ಸೀರೆಯನ್ನು ಉಡಿಸುವ ಪರಿಪಾಠ ಕೂಡ ರೂಡಿಯಲ್ಲಿದೆ. ಪವಿತ್ರ ತುಳಸಿ ಎಲೆಯು ಎಲ್ಲ ದೈವಿಕ ಕೆಲಸಗಳಿಗೂ ಅಗತ್ಯ. ತುಳಸಿ ಎಲ್ಲಿ ಇರುತ್ತಾಳೋ ಅಲ್ಲಿ ಶ್ರೀಕೃಷ್ಣ ನೆಲೆಸಿರುತ್ತಾನೆ ಎಂಬ ನಂಬಿಕೆ ಕೊಡ ಇದೆ. 
ತುಳಸಿ ಎಲೆ, ಬೀಜ,ಎಲ್ಲವು ಉಪಯೋಗ. ಯಾರು ತುಳಸಿ ಎಲೆಯನ್ನು ಅವರ ಹತ್ತಿರ ಇಟ್ಟುಕೊಂಡಿರುತ್ತಾರೋ ಅವರಿಗೆ ಎಲ್ಲವು ಶುಭವಾಗುತ್ತದೆ. ತುಳಸೀವನವನ್ನ ಬೆಳೆಸುವವರು ಎಲ್ಲ ಪಾಪದಿಂದ ಮುಕ್ತರಾಗುತ್ತಾರೆ. 

ಮನೆಯ ಮುಂದೆ ತುಳಸಿ ಗಿಡವನ್ನು ಬೆಳೆಸುವುದರಿಂದ ಮನೆಯಲ್ಲಿ ಇರುವ ಎಲ್ಲರು ಆರೋಗ್ಯವಾಗಿರುತ್ತಾರೆ ಎಂದು ವಿಜ್ಞಾನಿಕವಾಗಿಯು ಪ್ರೂಫ್ ಮಾಡಿದ್ದಾರೆ. 
                           ಹಬ್ಬದ ದಿನದಂದು ತುಳಸಿ ಮಾತೆಗೆ ಅರಿಶಿನ ಕುಂಕುಮ ಹಚ್ಚಿ ಹೂವಿನಿಂದ ಅಲಂಕಾರ ಮಾಡಿ ತುಳಸಿ ಸ್ತೋತ್ರಗಳನ್ನು ಓದಿ ತುಳಸಿಗೆ ಇಷ್ಟವಾದ ನೈವೇದ್ಯಗಳಾದ ಕೋಸಂಬರಿ ಅವಲಕ್ಕಿ, ಕಡ್ಲೆಕಾಳು ಉಸ್ಲಿ, ಮಾಡಿ ತುಳಸಿಯ ಮುಂದೆ ಇಟ್ಟು,  ಚಿಕ್ಕಮಕ್ಕಳಿಗೆ ಕಾಣಿಕೆಯನ್ನು ಕೊಡುವ ಪದ್ಧತಿಯು ಜಾರಿಯಲ್ಲಿದೆ.ಕಾರ್ತಿಕಮಾಸದಲ್ಲಿ ಬೇಗ ಕತ್ತಲೆಯಾಗುವುದರಿಂದ ಪ್ರತಿನಿತ್ಯ ತುಳಸಿಯ ಮುಂದೆ ದೀಪ ಹಚ್ಚುವುದು ರೂಡಿಯಲ್ಲಿದೆ. 
              ನೀವೂ ಸಹ 6 ಗಂಟೆಗೆ ಮುಂಚೆ ತುಳಸಿಯ ಮುಂದೆ ದೀಪವನ್ನು ಹಚ್ಚಿ ತುಳಸಿಯನ್ನು ಪೂಜಿಸಿ ಅರೋಗ್ಯ ಆಯುಷ್ ಅನ್ನು ಹೆಚ್ಚಿಸಿಕೊಳ್ಳಿ. 

No comments:

Post a Comment

Tulasi Pooja Maduva Vidhana Mattu Mahatva

                ನಮ್ಮ ಹಿಂದೂ ನಾರಿಯರು ದಿನನಿತ್ಯ ತುಳಸಿ ಪೂಜೆಯನ್ನು ಮಾಡುತ್ತಾರೆ . ಆದರೆ  ಕಾರ್ತಿಕ ಮಾಸದಲ್ಲಿ  ಬರುವ ಶುಕ್ಲ ಪಕ್ಷದ ದ್ವಾದಶಿ ದಿನದಂದು  ತುಳಸಿಯ ಮ...