ಹೋಟೆಲ್ ರೀತಿಯ ಸಾಫ್ಟ್ ರವೇ ಇಡ್ಲಿ

ಹೋಟೆಲ್  ರೀತಿಯಲ್ಲಿ   ದಿಢೀರ್  ಅಂತ ಮಾಡಬಹುದಾದ  ರವೇ ಇಡ್ಲಿ  ಹತ್ತೇ ನಿಮಿಷದಲ್ಲಿ
hastha's kitchen
hastha's kitchen 


ಬೇಕಾಗಿರುವ ಸಾಮಗ್ರಿಗಳು 
  • ಮಿಡಿಯಂ ರವೆ       1/4  ಕೆಜಿ 
  • ಗೋಡಂಬಿ            1೦
  • ಉಪ್ಪು                  ರುಚಿಗೆ ತಕ್ಕಷ್ಟು 
  • ಅಡುಗೆ ಸೋಡ      ಚಿಟಿಕೆಯಷ್ಟು 
  • ಉದ್ದಿನಬೇಳೆ           1 tsp
  • ಕಡ್ಲೆಬೇಳೆ               1 tsp
  • ಸಾಸುವೆ                1/2 tsp
  • ಕರಿಬೇವು ಕಟ್ ಸಣ್ಣಗೆ ಕಟ್ ಮಾಡಿದ್ದು        7 to 8
  • ಸಣ್ಣಗೆ ಹೆಚ್ಚಿದ ಕೊತ್ತಂಬರಿ  ಸೊಪ್ಪು     1/4  ಬಟ್ಟಲು 
  • ಹಸಿಮೆಣಸಿನಕಾಯಿ ಕಟ್ ಮಾಡಿದ್ದು      2
  • ಎಣ್ಣೆ                          6 ರಿಂದ 8 ಸ್ಪೂನ್ 
  • ಇಂಗು                      1/4 tsp
  • ಶುಂಠಿ ರಸ                2 tsp

  ಮಾಡುವ ವಿಧಾನ

 ಮೊದಲಿಗೆ ಒಂದು ಬಟ್ಟಲಿನಲ್ಲಿ ರವೆ , ರುಚಿಗೆ ತಕ್ಕಷ್ಟು ಉಪ್ಪು,  ಚಿಟಿಕಿ ಸೋಡ ಹಾಕಿ  ಕೈನಲ್ಲಿ ಮಿಶ್ರಣವಾಗುವಂತೆ  ಕಲಸಿಕೊಳ್ಳಿ .

ನಂತರ  ಬಾಣಲೆಯಲ್ಲಿ  ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ.

ಅದರಲ್ಲಿ ಗೋಡಂಬಿ ಹಾಕಿ ಸ್ವಲ್ಪ ಕೆಂಪಗೆ ಹುರಿದುಕೊಳ್ಳಿ. ಹುರಿದ ಗೋಡಂಬಿಯ
ನ್ನು ಒಂದು ಪ್ಲೇಟಿಗೆ  ಹಾಕಿಕೊಳ್ಳಿ.
ನಂತರ ಬಾಣಲೆಯಲ್ಲಿ ಇರುವ ಎಣ್ಣೆಗೆ  ಸಾಸಿವೆ,ಕಡ್ಲೆಬೇಳೆ, ಉದ್ದಿನಬೇಳೆ ,ಹಾಕಿ ಸ್ವಲ್ಪ ಹುರಿದು ಕೊಳ್ಳಿ .ನಂತರ  ಅದಕ್ಕೆ ಕಟ್ ಮಾಡಿದ  ಕರಿಬೇವು , ಹಸಿನೆಮೆಣಸಿನಕಾಯಿ , ಹಾಕಿ ಹುರಿದು ಸ್ಟವ್  ಆಫ್ ಮಾಡಿ, ಒಗ್ಗರಣೆ ಯನ್ನು ತಣ್ಣಗೆ ಆರಲು  ಬಿಡಿ .

ಆರಿದ ಒಗ್ಗರಣೆಯನ್ನು ರವೆಗೆ ಹಾಕಿ


ನಂತರ ರವೆಗೆ ಶುಂಠಿ ರಸ, ಇಂಗು  ಹಾಕಿ ಎಲ್ಲ ಮಿಶ್ರಣ  ಆಗುವಂತೆ  ಕಲಸಿಕೊಳ್ಳಿ.
ನಂತರ ಗಟ್ಟಿಯಾದ ಮೊಸರನ್ನು ಗಂಟಿಲ್ಲದಂತೆ ಚೆನ್ನಾಗಿ ಕಲಸಿಕೊಳ್ಳಿ.




ರವೇ ಮಿಶ್ರಣಕ್ಕೆ ಮೊಸರನ್ನು ಹಾಕಿ ಗಂಟಿಲ್ಲದಂತೆ  ಚೆನ್ನಾಗಿ ಕಲಸಿಕೊಳ್ಳಿ.


ಇಡ್ಲಿ ಹಿಟ್ಟಿನ ಹದಕ್ಕೆ ಬರುವಂತೆ ಕಲಸಿಕೊಳ್ಳಿ. ಮೊಸರು ಸಾಲದೇ ಇದ್ದರೆ  ಸ್ವಲ್ಪ ನೀರನ್ನು  ಬಳಸಿಕೊಳ್ಳಿ.          


ಕಟ್  ಮಾಡಿದ ಕೊತ್ತಂಬರಿಯನ್ನು ಹಾಕಿ  ಚೆನ್ನಾಗಿ ಕಲಸಿಕೊಳ್ಳಿ.   ಈಗ ಇಡ್ಲಿ  ಹಿಟ್ಟು ರೆಡಿಯಾಗಿದೆ.




ನಂತರ  ಇಡ್ಲಿ ಪಾತ್ರೆಗೆ ನೀರನ್ನು ಹಾಕಿ ಸ್ಟವ್ ಮೇಲೆ  ಇಟ್ಟು ನೀರನ್ನು ಕಾಯಲು ಬಿಡಿ.
ನೀರು ಕಾಯುವಷ್ಟರಲ್ಲಿ ಇಡ್ಲಿ ತಟ್ಟೆಗೆ ಎಣ್ಣೆಯನ್ನು ಹಚ್ಚಿ .
ಎಣ್ಣೆ  ಹಚ್ಚಿದ ಇಡ್ಲಿ ತಟ್ಟೆಗೆ ಹುರಿದಿಟ್ಟ ಗೋಡಂಬಿಯನ್ನು ಚಿತ್ರದಲ್ಲಿ ತೋರಿಸಿರುವಂತೆ  ಇಟ್ಟು ಕೊಳ್ಳಿ .





ನಂತರ ರವೇ ಮಿಶ್ರಣನವನ್ನು ಇಡ್ಲಿ ತಟ್ಟೆಗೆ ಹಾಕಿ. 


ನಂತರ ಕಾದಿರುವ ಇಡ್ಲಿ ಪಾತ್ರೆಯಲ್ಲಿ ಇಡ್ಲಿ ತಟ್ಟೆಗಳನ್ನು ಇಟ್ಟು   2೦ ನಿಮಿಷ ಬೇಯಿಸಿಕೊಳ್ಳಿ . 
ಈಗ ಬಿಸಿ ಬಿಸಿ ರವೇ  ಇಡ್ಲಿ ಸವಿಯಲು ಸಿದ್ಧವಾಗಿದೆ. ಹೋಟೆಲ್ ನ ರೀತಿಯಲ್ಲೇ  ಇಡ್ಲಿ  ತಿನ್ನಲು ಬಹಳ ರುಚಿಯಾಗಿರುತ್ತದೆ.
ಈ ಇಡ್ಲಿ ಯನ್ನು ಆಲೂಗಡ್ಡೆ ಸಾಗುವಿನೊಂದಿಗೆ ತಿನ್ನಲು ರೆಡಿಯಾಗಿದೆ.


ನೀವು ರವೆ   ಇಡ್ಲಿಯನ್ನು  ಮನೆಯಲ್ಲಿ  ಮಾಡಿ ಹೇಗಿದೆ ಎಂದು ಕಾಮೆಂಟ್  ಮೂಲಕ ತಿಳಿಸಿ ಫ್ರೆಂಡ್ಸ್ .

ಕೆಲವು ಟಿಪ್ಸ್ ನಿಮಗಾಗಿ 

  • ರವೇ ಇಡ್ಲಿ  ಮಾಡುವಾಗ  ಮೀಡಿಯಂ ರವೇ ಅಲ್ಲದೆ ಅದರಲ್ಲಿ ಸ್ವಲ್ಪ ಚಿರೋಟಿ ರವೆಯನ್ನು ಸೇರಿಸಿಕೊಳ್ಳಬಹುದು . 
  • ಹೆಚ್ಚು ಕೊತ್ತಂಬರಿ  ಹಾಕಿದಷ್ಟು  ಇಡ್ಲಿ  ರುಚಿಯಾಗಿರುತ್ತದೆ .
  • ಅರೋಗ್ಯ ದೃಷ್ಟಿಯಲ್ಲಿ ಹೆಚ್ಚು ಎಣ್ಣೆ ಬಳಸುವ ಬದಲು ತುಪ್ಪವನ್ನು ಬಳಸಬಹುದು. 
  • ಇಡ್ಲಿ ತಟ್ಟೆಗೆ ಎಣ್ಣೆ ಬದಲು ತುಪ್ಪವನ್ನು ಬಳಸಿಕೊಳ್ಳಿ. 


<






No comments:

Post a Comment

Tulasi Pooja Maduva Vidhana Mattu Mahatva

                ನಮ್ಮ ಹಿಂದೂ ನಾರಿಯರು ದಿನನಿತ್ಯ ತುಳಸಿ ಪೂಜೆಯನ್ನು ಮಾಡುತ್ತಾರೆ . ಆದರೆ  ಕಾರ್ತಿಕ ಮಾಸದಲ್ಲಿ  ಬರುವ ಶುಕ್ಲ ಪಕ್ಷದ ದ್ವಾದಶಿ ದಿನದಂದು  ತುಳಸಿಯ ಮ...