ಹೆಸರುಬೇಳೆ ಪಾಯಸ
ಬೇಕಾಗಿರು ಸಾಮಗ್ರಿಗಳು
- ಹೆಸರುಬೇಳೆ 1 cup
- ತೆಂಗಿನಕಾಯಿಯ ಹಾಲು 3 cup
- ಬೆಲ್ಲ 1/2 cup
- ಏಲಕ್ಕಿ ಪುಡಿ ಒಂದು ಚಿಟಿಕೆಯಷ್ಟು
- ನೀರು ಸ್ವಲ್ಪ
- ತುಪ್ಪ 2 spoon
- ದ್ರಾಕ್ಷಿ ಮತ್ತು ಗೋಡಂಬಿ 10 gm
ಮೊದಲಿಗೆ ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಬಾಣಲೆ ಬಿಸಿಯಾದ ಮೇಲೆ ಹೆಸರುಬೇಳೆ ಹಾಕಿ ಸ್ವಲ್ಪ ಕೆಂಪಗೆ ಬರುವಂತೆ ಹುರಿಯಬೇಕು .
ನಂತರ ಒಂದು ಕುಕ್ಕರಿನಲ್ಲಿ ಹುರಿದ ಹೆಸರುಬೇಳೆ ಒಂದು ಬಟ್ಟಲು ತೆಂಗಿನಕಾಯಿಯ ಹಾಲು ಒಂದುಬಟ್ಟಲು ನೀರು ಹಾಕಿ ಕುಕ್ಕರಿನಲ್ಲಿ ಒಂದು ವಿಶಿಲ್ ಬರುವಬರುವ ತನಕ ಬೇಯಿಸಿಕೊಳ್ಳಿ.
ಅದು ಸ್ವಲ್ಪ ಬೆಂದಿರಬೇಕು. ಈಗ ಕುಕ್ಕರಿನ ಮುಚ್ಚಳ ತೆಗೆದು ಅದಕ್ಕೆ ಪುಡಿ ಮಡಿದ ಬೆಲ್ಲ ಮತ್ತು ಏಲಕ್ಕಿ ಪುಡಿ ಹಾಕಿ ಸ್ವಲ್ಪಹೊತ್ತು ಮತ್ತೆ ಬೇಯಿಸಿಕೊಳ್ಳಿ. ನಂತರ ಕೊನೆಯದಾಗಿ ಉಳಿದಿರುವ ತೆಂಗಿನಹಾಲನ್ನು ಬೆಂದಿರುವ ಹೆಸರುಬೇಳೆ ಮಿಶ್ರಣಕ್ಕೆ ಹಾಕಿಕೊಳ್ಳಿ ಕೊನೆಯದಾಗಿ ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ದ್ರಾಕ್ಷಿ ಮತ್ತು ಗೋಡಂಬಿ ಹುರಿದು ಹೆಸರುಬೇಳೆ ಮಿಶ್ರಣಕ್ಕೆ ಹಾಕಿ.
ಹೆಸರುಬೇಳೆ ಪಾಯಸ ಸವಿಯಲು ರೆಡಿಯಾಗಿದೆ .
ಹೆಸರುಬೇಳೆ ಪಾಯಸ ಸವಿಯಲು ರೆಡಿಯಾಗಿದೆ .
ತೆಂಗಿನಕಾಯಿಯ ಹಾಲು ಮಾಡುವ ವಿಧಾನ
ಒಂದು ದೊಡ್ಡ ತೆಂಗಿನಕಾಯಿ ತೆಗೆದುಕೊಂದು ಅದನ್ನು ಒಡೆದು ತುರಿದುಕೊಳ್ಳಿ.
ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ 3 ಬಟ್ಟಲು ಸ್ವಲ್ಪ ಬಿಸಿನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಇದನ್ನು ಒಂದು ಬಿಳಿ ಬಟ್ಟೆಯಲ್ಲಿ ಹಾಕಿ ಶೋದಿಸಿಕೊಳ್ಳಿ ಈಗ ತೆಂಗಿನಕಾಯಿಯ ಹಾಲು ರೆಡಿಯಾಗಿದೆ .
ಕೆಲವು ಟಿಪ್ಸ್ ನಿಮಗಾಗಿ
ಹೆಸರುಬೇಳೆ ನಮ್ಮ ದೇಹಕ್ಕೆ ತಂಪನ್ನು ನೀಡುತ್ತದೆ.
ಜ್ವರ ಬಂದಾಗ ಹೆಸರುಬೇಳೆಯನ್ನು ನೀರಿನಲ್ಲಿ ತೊಳೆದು ಮತ್ತೆ ಅದಕ್ಕೆ ಸ್ವಲ್ಪ ನೀರು ಹಾಕಿ ನೆನೆಸಿ 2 ಅಥವ 3 ಗಂಟೆಗಳ ಕಾಲ ಅದನ್ನು ನೆನೆಸಿ, ಆ ನೀರನ್ನು ಕುಡಿದರೆ ದೇಹಕ್ಕೆ ತಂಪು ನೀಡುತ್ತದೆ . ಇದರಿಂದ ದೇಹದ ಉಷ್ಣಾಂಶ ಕಡಿಮೆಯಾಗಿ ಜ್ವರ ಬೇಗ ಕಡಿಮೆಯಾಗುತ್ತದೆ .
ಬೆಲ್ಲವು ನಮ್ಮ ದೇಹಕ್ಕೆ ಕಬ್ಬಿನಾಂಶ ನೀಡುತ್ತದೆ . ತೆಂಗಿನಹಾಲಿನಲ್ಲಿ ಪ್ರೊಟೀನ್ ಹೆಚ್ಚಾಗಿ ಇರುತ್ತದೆ .
ಹಸುವಿನ ಹಾಲಿಗಂತೂ ತೆಂಗಿನಕಾಯಿಯ ಹಾಲು ಬಹಳ ಉತ್ತಮ .
ಹೆಸರುಬೇಳೆ ಪಾಯಸ
ಮಾಡುವ ಸಮಯ 30 ನಿಮಿಷಗಳು .
ಮಾಡಿದವರು : ರೂಪ
No comments:
Post a Comment